WELCOME TO OUR BLOG #GBLPS MANGALPADY ...........................................WELCOME TO OUR BLOG #GBLPS MANGALPADY........................................... WELCOME TO OUR BLOG #GBLPS MANGALPADY

Friday 1 June 2018

ಮಂಗಲ್ಪಾಡಿ ಶಾಲೆಯಲ್ಲಿ'ಉಪಜಿಲ್ಲಾ ಶಾಲಾ ಪ್ರವೇಶೋತ್ಸವ' ಸಂಪನ್ನ
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಮತ್ತು ಪ್ರೈಮರಿ ಶಾಲೆಯ ಎರಡು ಹವಾ ನಿಯಂತ್ರಿತ  ಹೈ-ಟೆಕ್ ಸ್ಮಾರ್ಟ್ ತರಗತಿಗಳ ಉದ್ಘಾಟನಾ ಸಮಾರಂಭವು ಜೂನ್ 1 ಶುಕ್ರವಾರ ದಂದು ಮಂಗಲ್ಪಾಡಿ ಕುಕ್ಕಾರ್ ಸರಕಾರಿ ಶಾಲೆಯಲ್ಲಿ  ಸಂಪನ್ನಗೊಂಡಿತು. ಹೊಸ ಅಧ್ಯಯನ ವರ್ಷಕ್ಕೆ ನವಾಗತ ಪುಟಾಣಿಗಳನ್ನು ಪಂಚಾಯತ್ ಮತ್ತು ಉಪಜಿಲ್ಲಾ ವಿದ್ಯಾಧಿಕಾರಿಗಳ ನೇತೃತ್ವದಲ್ಲಿ ವಾದ್ಯಮೇಳಗಳ ವರ್ಣರಂಜಿತ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಶಾಲಾ ಹಿರಿಯ ಮಕ್ಕಳು ಮತ್ತು ಶಿಕ್ಷಕರು ಸಿಹಿ ನೀಡಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ. ಶಾಹುಲ್ ಹಮೀದ್ ರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಶ್ರೀ. ಎ.ಕೆ.ಎಂ ಅಶ್ರಫ್ ಉದ್ಘಾಟನೆಗೈದರು. ಮಕ್ಕಳಿಗಿರುವ ಉಚಿತ ಕಲಿಕಾ ಕಿಟ್, ಸಮವಸ್ತ್ರ ಸಮಾರಂಭದಲ್ಲಿ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ರೇವತಿ.ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಚೇರ್.ಮ್ಯಾನ್ ಬಹರೈನ್ ಮೊಹಮ್ಮದ್, ಶ್ರೀ ಅಬ್ದುಲ್ ರಝಾಕ್, ಶ್ರೀಮತಿ ಅಯಿಷತ್ ಫಾರಿಜ, ಶ್ರೀಮತಿ ಸಂಗೀತ ಮೊಳ್, ಎ.ಇ.ಒ ಶ್ರೀ ದಿನೇಶ್ ವಿ, ಬಿ.ಪಿ.ಒ ಶ್ರೀ ವಿಜಯ್ ಕುಮಾರ್, ಶ್ರೀ ಮುಸ್ತಫಾ ಅಡ್ಕ ಹಾಗೂ ವಿವಿಧ ರಾಜಕೀಯ ಪಕ್ಷದ ನೇತಾರರು ಹಾಜರಿದ್ದರು. ಹೈಸ್ಕೂಲ್ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ .ಕೆ ವಂದಿಸಿದರು.


Saturday 27 January 2018

ಶತಮಾನದ 
ಸಂಭ್ರಮಾಚರಣೆಯೊಂದಿಗೆ ಸಡಗರದಿಂದ ನಡೆಯಿತು 
ನಮ್ಮ ಶಾಲಾ ವಾರ್ಷಿಕೋತ್ಸವ

    ಶತ ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಸರಕಾರಿ ಎಲ್.ಪಿ ಶಾಲೆ ಮಂಗಲ್ಪಾಡಿಯ ವಾರ್ಷಿಕೋತ್ಸವವು ಜನವರಿ 27 ರಂದು ಸಂಪನ್ನಗೊಂಡಿತು. ಬೆಳಿಗ್ಗೆ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಮುಸ್ತಫಾ ರವರು ಧ್ವಜಾರೋಹಣಗೈದರು. ಸಮಾರಂಭವನ್ನು ಉದ್ಘಾಟನೆ ಮಾಡುತ್ತಾ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಶ್ರೀ ಎ.ಕೆ.ಎಮ್ ಅಶ್ರಫ್ ರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನಲಂಕರಿಸಿ ಮಂಗಲ್ಪಾಡಿ ಗ್ರಾ.ಪಂಚಾಯತ್ ಅಧ್ಯಕ್ಷ ಶ್ರೀ ಶಾಹುಲ್ ಹಮೀದ್  ಮಾತನಾಡಿದರು. ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ತಾವು ಸದಾ ಸಿದ್ದ ಎಂದು ಭರವೆಸೆಯಿತ್ತರು. ಇದೇ ಸಂದರ್ಭದಲ್ಲಿ ಸ್ಥಳೀಯಾಡಳಿತ ನಿಧಿಯಿಂದ ಶಾಲೆಗೆ ಮಂಜೂರಾದ ಎರಡು ಹೈ-ಟೆಕ್ ಸ್ಮಾರ್ಟ್ ಕ್ಲಾಸ್ ಗಳು ಸೇರಿದಂತೆ ಹಲವಾರು ಬೆಳವಣಿಗೆಗಳನ್ನು ಸ್ಮರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇವತಿ.ಕೆ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ನಿವೃತ್ತ ಅಧ್ಯಾಪಕರುಗಳಿಗೆ  ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಕಳೆದ ವರ್ಷದ ಎಲ್.ಎಸ್.ಎಸ್ ಪರೀಕ್ಷಾ ವಿಜಯಿಗಳಿಗೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ದಿನೇಶ್ ರವರು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಮುಖ್ಯ ಅಥಿತಿ ಬ್ಲಾಕ್ ಪಂಚಾಯತ್ ಚೇರ್ ಮ್ಯಾನ್ ಶ್ರೀ ಬಹರೈನ್ ಮೊಹಮ್ಮದ್ ರವರು ಶುಭ ಹಾರೈಸಿದರು. ಸಮಾರಂಭದಲ್ಲಿ ಶ್ರೀಮತಿ ಜಮೀಲಾ ಸಿದ್ದಿಕ್, ಶ್ರೀ ಅಬ್ದುಲ್ ರಜಾಕ್, ಶ್ರೀಮತಿ ಅಯಿಷತ್ ಫಾರಿಜಾ, ಶ್ರೀ ಬಿ.ಎಮ್ ಮುಸ್ತಫಾ, ಶ್ರೀಮತಿ ಲತಾ. ಕೆ, ಶ್ರೀ ವಿಜಯ್ ಕುಮಾರ್, ಶ್ರೀ ಬಾಲಕೃಷ್ಣ ಅಂಬಾರ್, ಶ್ರೀಮತಿ ಜ್ನಾನಸುಧಾ, ಶ್ರೀ ವಸಂತ ಕುಮಾರ್, ಶ್ರೀ ರಾಜಶೇಖರ್, ಶ್ರೀ ಜಲೀಲ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತರಿಗೆ ಬಹುಮಾನ ವಿತರಣೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾಪ್ತಿಯಾಯಿತು.