WELCOME TO OUR BLOG #GBLPS MANGALPADY ...........................................WELCOME TO OUR BLOG #GBLPS MANGALPADY........................................... WELCOME TO OUR BLOG #GBLPS MANGALPADY

Thursday, 14 December 2017

 ಮ್ಯಾಜಿಕ್ ವಾಲ್
ತರಗತಿಯಲ್ಲಿ ಮಕ್ಕಳ ಹೊಸ ಬುಲೆಟಿನ್ ಬೋರ್ಡ್ "ಮ್ಯಾಜಿಕ್ ವಾಲ್"ನ್ನು
ಶಾಲಾ ಮುಖ್ಯೋಪಾಧ್ಯಾಯಿನಿ ರೇವತಿ.ಕೆ  ಉದ್ಘಾಟಿಸಿದರು. ಮಕ್ಕಳು ರಚಿಸಿದ ಚಿತ್ರಗಳು,
ಲೇಖನಗಳನ್ನು ಲಗತ್ತಿಸಲಾಯಿತು. ಮಕ್ಕಳ ರಚನಾತ್ಮಕ ಸಾಮರ್ಥ್ಯಗಳನ್ನು
ಪ್ರದರ್ಶಿಸಲು ಇದು ಉಪಕಾರಿಯಾಗಲಿ ಎಂದು ಆಶಿಸಿದರು.



Tuesday, 12 December 2017

ವಿದಾಯ ಕೂಟ
ಸುಮಾರು 2 ವರ್ಷಗಳಷ್ಟು ಕಾಲ ಸೇವೆಗೈದ ನಮ್ಮ ಶಾಲಾ PTCM ಶ್ರೀಮತಿ ಗೀತಾ.ಕೆ ಜಿ.ಎಲ್.ಪಿ.ಎಸ್ ತಿರುವಕೋಳಿಗೆ ವರ್ಗಾವಣೆಗೊಂಡ ಕ್ಷಣದಲ್ಲಿ ಅವರನ್ನ ಶಾಲಾ ತಂಡದ ಪರವಾಗಿ ಬೀಳ್ಕೊಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ರೇವತಿ.ಕೆ  ಹಾಗೂ ಎಲ್ಲರೂ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. 




Wednesday, 6 December 2017

| ಸ್ಮಾರ್ಟ್ ಗುರುತಿನ ಕಾರ್ಡ್ ವಿತರಣೆ |
 | ನೂತನ ಔದ್ಯೋಗಿಕ ಲೋಗೋ ಬಿಡುಗಡೆ | ಪ್ರಮಾಣ ಪತ್ರ ವಿತರಣೆ |

ಮಂಗಲ್ಪಾಡಿ ಸರಕಾರೀ ಬುನಾದಿ ಯಲ್.ಪಿ ಶಾಲೆಯಲ್ಲಿ ದಿನಾಂಕ 05-12-2017 ರಂದು ಮದ್ಯಾಹ್ನ ನಡೆದ ರಕ್ಷಕರ ಸಭೆಯಲ್ಲಿ ಶಾಲಾ ಮಕ್ಕಳಿಗೆ ನೂತನವಾಗಿ ತಯಾರಿಸಲಾದ QR-CODE ಆಧಾರಿತ ಸ್ಮಾರ್ಟ್ ಗುರುತಿನ ಕಾರ್ಡ್ ವಿತರಣಾ ಕಾರ್ಯವು ಜರಗಿತು. ಶಾಲಾ ರಕ್ಷಕ ಸಂಘದ ಅಧ್ಯಕ್ಷ ಮುಸ್ತಫಾ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇವತಿ.ಕೆ ರಕ್ಷಕರನ್ನು ಸ್ವಾಗತಿಸಿದರು. ಮಂಗಲ್ಪಾಡಿ ಸ್ಥಾಯಿ ಸಮಿತಿ ಸದಸ್ಯ ಮೊಹಮ್ಮದ್ ಉಪ್ಪಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಗುರುತಿನ ಕಾರ್ಡ್ ವಿತರಿಸಿದರು. ಬಳಿಕ ಶಾಲಾ ನೂತನ ಔದ್ಯೋಗಿಕ ಲೋಗೋ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವ ಮತ್ತು ವಿವಿಧ ಉಪಜಿಲ್ಲಾ, ಜಿಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕರಾದ ಆಶಾ, ಜೋಕಿ, ಸತೀಶ್, ಸರಿತ, ಪ್ರವೀಣ್, ಭಾಗ್ಯಭಾಸ್, ಚಂದ್ರಕಾಂತ, ಇಷಾಕ್  ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದರು. ಹಿರಿಯ ಶಿಕ್ಷಕಿ ಆಶಾ ವಂದಿಸಿದರು.



















Friday, 1 December 2017

ಮ್ಯಾಜಿಕ್... ಮ್ಯಾಜಿಕ್...ಮ್ಯಾಜಿಕ್

ಮಕ್ಕಳ ಜೊತೆಗೆ ಶಿಕ್ಷಕ ಪ್ರವೀಣ್ ಕುಮಾರ್ ಬೆಲೂನ್ ರಾಕೆಟ್
ಪ್ರಯೋಗದಲ್ಲಿ ತೊಡಗಿರುವುದು.





Tuesday, 14 November 2017

ಉತ್ತಮ ಓದು, ಉತ್ತಮ ಕಲಿಕೆ, ಉತ್ತಮ ಜೀವನ "
ಲೈಬ್ರರಿ ಪುಸ್ತಕವನ್ನು ತನ್ನ ಶಾಲೆಗೆ ಕೊಡುಗೆಯಾಗಿ ನೀಡಿದ ಧನೀಶ.

Monday, 13 November 2017

ಮಂಜೇಶ್ವರ ಸಬ್ ಜಿಲ್ಲಾ ಕಲೋತ್ಸವ ವಿಜಯಿಗಳಿಗೆ ಪ್ರಮಾಣ ಪತ್ರ ವಿತರಣೆ 




Thursday, 2 November 2017

ಉತ್ತಮ ಓದು, ಉತ್ತಮ ಕಲಿಕೆ, ಉತ್ತಮ ಜೀವನ "
ಲೈಬ್ರರಿ ಪುಸ್ತಕವನ್ನು ತನ್ನ ಶಾಲೆಗೆ ಕೊಡುಗೆಯಾಗಿ ನೀಡಿದ ಶಾಲಾ ಅಧ್ಯಾಪಕ ಸತೀಶ್ ಮತ್ತು ಪುಟಾಣಿಗಳು...




"ಜೀವನದಲ್ಲಿ ಉತ್ತಮ ಪುಸ್ತಕಗಳು ನಮ್ಮ ಉತ್ತಮ ಸಂಗಾತಿಗಳಾಗುತ್ತವೆ"
ಅಧ್ಯಾಪಕರಾದ ಸತೀಶ್, ಚಂದ್ರಕಾಂತ್ ಮತ್ತು ಭಾಗ್ಯಭಾಸ್ ರಿಂದ ಮಕ್ಕಳಿಗೆ ಓದಿನ ಮಹತ್ವದ ಬಗ್ಗೆ ಕಿವಿನುಡಿ.







Wednesday, 1 November 2017

ನಮ್ಮ ವಿದ್ಯಾಲಯಕ್ಕೆ ಬಂದ ಪುಸ್ತಕ ಬಂಡಿ
ನವೆಂಬರ್ 1 ರಿಂದ 14 ರ ವರೆಗೆ ನಡೆಯುವ
" ಉತ್ತಮ ಓದು
ಉತ್ತಮ ಕಲಿಕೆ
ಉತ್ತಮ ಜೀವನ "
ಸಂದೇಶ ಯಾತ್ರೆ "ಪುಸ್ತಕ ಬಂಡಿ " ನಮ್ಮ ವಿದ್ಯಾಲಯಕ್ಕೆ ಬಂದಿತು.






Saturday, 28 October 2017



ಅಭಿನಂದನೆಗಳು | CONGRATULATIONS..!!
ವಿ.ಎ.ಯು.ಪಿ ಮತ್ತು ಎಸ್.ವಿ.ವಿ.ಹೆಚ್.ಎಸ್ ಮೀಯಪದವು ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರಮೆಳ 2017 ದಲ್ಲಿ ಶೀಟ್ ಮೆಟಲ್ ವರ್ಕ್ ವಿಭಾಗದಲ್ಲಿ ಪ್ರಥಮ A ಗ್ರೇಡ್ ನೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ 4ನೇ ತರಗತಿಯ ವಿಭಿನೇಶ್.

Wednesday, 25 October 2017

ಮೀಸೆಲ್ಸ್ ರುಬೆಲ್ಲಾ ವಾಕ್ಸಿನಶನ್ | MR VACCINE CAMPAIGN