Saturday, 28 October 2017
Sunday, 22 October 2017
"ಹಿರಿಯ ವಿದ್ಯಾರ್ಥಿ ಸಂಗಮ-2017"
ಕೇರಳ ಸರಕಾರದ ಯಶಸ್ವಿ
ಯೋಜನೆಯಾದ “ಸಾರ್ವಜನಿಕ
ಶಿಕ್ಷಣ ಸಂರಕ್ಷಣ ಯಜ್ಞ” ವನ್ನು
ಸಾಕಾರಗೊಳಿಸಿ ವಿದ್ಯಾಲಯದ ಉಳಿವು ಮತ್ತು ಪ್ರಗತಿಗೋಸ್ಕರ ಶಾಲಾ ಮಟ್ಟದಲ್ಲಿ ಆಯೋಜಿಸಿದ "ಹಿರಿಯ ವಿದ್ಯಾರ್ಥಿ ಸಂಗಮ-2017" ಕಾರ್ಯಕ್ರಮವು ದಿನಾಂಕ 22.10.2017 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಶಾಲಾ ಮುಖ್ಯ ಶಿಕ್ಷಕಿ ರೇವತಿ
ಟೀಚರ್ ಸ್ವಾಗತಿಸಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ಕ್ಷೇತ್ರ ನಿರೂಪಣಾಧಿಕಾರಿ ಶ್ರೀ ವಿಜಯ್ ಕುಮಾರ್ ಕಾರ್ಯಕ್ರಮದ
ಬಗ್ಗೆ ಮುಖ್ಯ ವಿಚಾರಗಳನ್ನು ಮಂಡಿಸಿದರು. ಹಿರಿಯ ಶಿಕ್ಷಕ ಸತೀಶ್ ಕುಮಾರ್ ವಿದ್ಯಾಲಯ ಅಭಿವೃದ್ದಿ
ಸೆಮಿನಾರ್ ಮಂಡಿಸಿದರು. ಮಂಗಲ್ಪಾಡಿ ವಾರ್ಡು ಸದಸ್ಯೆ, ಶಾಲಾ
ಎಸ್.ಎಮ್,ಸಿ ಅಧ್ಯಕ್ಷರು, ಶಾಲಾ ಹಿತೈಷಿ ಬಳಗ, ಪೂರ್ವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದ
ದವರೆಲ್ಲರೂ ಸಭೆಯಲ್ಲಿ ಭಾಗವಹಿಸಿದ್ದರು.
Subscribe to:
Posts (Atom)